1# ಗೋಳಿ ಬಜೆ, ಕಾಯಿ ಚಟ್ನಿ ರೆಸಿಪಿ:
ಯಾವಾಗಲಾದರು ಇಡ್ಲಿ ಮಾಡಿದಾಗ ಹಿಟ್ಟು ಉಳಿದರೇ,,, ಉಳಿದ ಇಡ್ಲಿ ಹಿಟ್ಟಿನಲ್ಲಿ ಒಂದು ಬಟ್ಟಲು ಮೈದಾ ಹಿಟ್ಟು ಸೇರಿಸಿ ..ಒಂದು ಈರುಳ್ಳಿ ಸಣ್ಣಗೆ ಕಟ್ ಮಾಡಿದ್ದು..ಕಾರದ ಪುಡಿ,ಅಜ್ವಾನ್,ರುಚಿಗೆ ತಕ್ಕಷ್ಟು ಉಪ್ಪು,ಕೊತ್ತಮುರಿ ಸೊಪ್ಪು,ಅಡುಗೆ ಸೋಡಾ, ಸಲ್ಪ,ಇಂಗು, ಒಂದ್ ಚಮಚ ಸಕ್ಕರೆ ಎಲ್ಲ ಹಾಕಿ ಚೆನ್ನಾಗಿ ಕಲಸಿ ಕೊಳ್ಳಿ.ದೋಸೆ ಹಿಟ್ಟಿನ ಹದದ ಸಲ್ಪ ಗಟ್ಟಿಯಾಗಿ ಕಲಸಿಕೊಂಡು...,
ಸ್ಟವ್ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಕಾದ ನಂತರ ಕೈ ಇಂದ ಸಲ್ಪ ಸಲ್ಪ ವೇ ತೆಗೆದುಕೊಂಡು ಎಣ್ಣೆಯಲ್ಲಿ ಕರಿಯಿರಿ..
ಗೋಳಿ ಬಜೆ ರೆಡಿ .... 😋ಪ್ಲೇಟ್ ಗೆ ಸರ್ವ್ ಮಾಡಿ..😚
2# ಸಂಜೆ snacks ಗೆ ಬಿಸಿ ಬಿಸಿ ತರಕಾರಿ ಬೋಂಡ..😋
ಸ್ವಲ್ಪ ದಪ್ಪವಾಗಿ ಹೆಚ್ಚಿಕೊಂಡಂತಹ ಈರುಳ್ಳಿ, ಹಿರೇಕಾಯಿ, ಎಲೆಕೋಸು, ಸ್ವಲ್ಪ ಕ್ಯಾರೆಟ್ ತುರಿ, ದಪ್ಪ ಮೆಣಸಿನಕಾಯಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು ಎಲ್ಲವನ್ನು ಚೆನ್ನಾಗಿ ಕೈಯಲ್ಲಿ ಕಲಿಸಿಕೊಂಡು ಇದಕ್ಕೆ ಅರ್ಧ ಕಪ್ ಕಡ್ಲೆ ಹಿಟ್ಟು ಎರಡರಿಂದ ಮೂರು ಚಮಚ ಅಕ್ಕಿ ಹಿಟ್ಟು ಸ್ವಲ್ಪ ಕಾರ್ನ್ ಫ್ಲೋರ್ ರುಚಿಗೆ ತಕ್ಕಷ್ಟು ಉಪ್ಪು ಜೀರಿಗೆ ಪುಡಿ ಸ್ವಲ್ಪ ಅಡುಗೆ ಸೋಡಾ ಚೆನ್ನಾಗಿ ಕಲಸಿ ಕಾದ ಎಣ್ಣೆಯಲ್ಲಿ ಕರಿಯಿರಿ.


