ಪ್ರಕೃತಿಯ ಸೌಂದರ್ಯ

0
 


ಪ್ರಕೃತಿಯ ಸೌಂದರ್ಯ ನಾವು ಊಹಿಸಲೂ ಸಾಧ್ಯವಿಲ್ಲ ನಿಸರ್ಗ ನಮಗೆ ಸಾಧ್ಯವಾಗದಷ್ಟು ಕೊಟ್ಟಿದೆ. ಅಷ್ಟು ಕೊಡಲು ಪ್ರಕೃತಿಯಿಂದ ಮಾತ್ರ ಸಾಧ್ಯ, ಈ ಭೂಮಿಯಲ್ಲಿ ಜೀವನ ಮಾಡಲು ಪ್ರಕೃತಿಯ ಸಂಪನ್ಮೂಲ ಅತ್ಯವಶ್ಯಕ. ವಿಶ್ವದಲ್ಲಿ ಇನ್ನೂ ಅನೇಕ ಗ್ರಹಗಳಿವೆ ಆದರೆ ಈ ಪ್ರಕೃತಿ ಇಲ್ಲದೆ ಅಲ್ಲಿಜೀವನಸಾಧ್ಯವಿಲ್ಲ.ಹೀಗೆ ಪ್ರಕೃತಿಯೇ ನಮ್ಮ ಜೀವನಕ್ಕೆ ಆಧಾರ. ಭೂಮಿಯ ಮೇಲೆ ಎಲ್ಲೆಲ್ಲೂ ಪ್ರಕೃತಿ ಒಂದೇ ರೀತಿ ಇರುವುದಿಲ್ಲ. ಸ್ಥಳಕ್ಕನುಗುಣವಾಗಿ, ಪ್ರಕೃತಿಯು ತನ್ನ ನೋಟವನ್ನು ಬದಲಾಯಿಸುತ್ತದೆ ಮತ್ತು ಆ ಸ್ಥಳದ ಪ್ರಕಾರ ನಮಗೆ ಸಂಪನ್ಮೂಲಗಳನ್ನು ಒದಗಿಸುತ್ತದೆ, ಜೊತೆಗೆ ನಮ್ಮ ಮನಸ್ಸಿಗೆ, ನಮ್ಮ ಕಣ್ಣುಗಳಿಗೆ ಸಾಂತ್ವನ ನೀಡುತ್ತದೆ. 


ಪ್ರಕೃತಿ ನಮ್ಮ ಅಭಿವೃದ್ಧಿಗೆ ವಿಶೇಷ ಸಂಪನ್ಮೂಲ ಕೊಟ್ಟಿದೆ,ಹಾಗೆ ಇದರ ಸೌಂದರ್ಯದ ಸವಿಯನ್ನು ಸವಿಯಬಹುದು ಮತ್ತು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು,ಅದರಿಂದ ನಾವು ಜೀವಿಸುತ್ತೆವೆ, ಆದ್ದರಿಂದ ಅದನ್ನು ಉಳಿಸಿ ಬೆಳೆಸಿ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಮತ್ತು ಅದನ್ನು ನಮ್ಮ ಸ್ವಾರ್ಥಕ್ಕಾಗಿ ನಾಶಪಡಿಸಬಾರದು. ಇದರಿಂದ ಜೀವವ್ಯಸ್ಥೆಯ ಮುಂದಿನ ಪೀಳಿಗೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ,  ಇದಲ್ಲದೆ ಮುಂದೊಂದು ದಿನ ಜನರು ಈ ಪ್ರಕೃತಿಯ ಸೌಂದರ್ಯವನ್ನು ಕಂಪ್ಯೂಟರ್‌ನಲ್ಲಿಯೇ ನೋಡಬೇಕಾಗುತ್ತದೆ ಮತ್ತು ಅನುಭವಿಸಬೇಕಾಗುತ್ತದೆ.

Post a Comment

0Comments
Post a Comment (0)