ನಮ್ಮ ಮನೇಲಿ ಕರಿಬೇವು ಮರ ಇದೆ. ಹಾಗಾಗಿ ಆರೋಗ್ಯಕರವಾದ ಕರಿಬೇವು ಚಟ್ಟಿಪುಡಿ ಸದಾ ಇದ್ದೇ ಇರುತ್ತೆ. ಸಕ್ಕರೆ ಖಾಯಿಲೆಗೆ, ಕೂದಲಿನ ಬೆಳವಣಿಗೆಗೆ, ತೂಕ ನಿಯಂತ್ರಣಕ್ಕೆ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಹೀಗೆ ಹಲವಾರು ಖಾಯಿಲೆಗಳಿಗೆ ಇದು ರಾಮಬಾಣ.ಬಿಸಿ ಅನ್ನಕ್ಕೆ ತುಪ್ಪದ ಜೊತೆ ಕಲೆಸಿ ತಿಂದರೆ ರುಚಿ ಹೆಚ್ಚು.
ನಾಲ್ಕು ಹಿಡಿ ಕರಿಬೇವು, ತಲಾ ನಾಲ್ಕು ಟೇಬಲ್ ಸ್ಪೂನ್ ಉದ್ದು ಮತ್ತು ಕಡ್ಲೆ ಬೇಳೆ, ಸ್ವಲ್ಪ ಹುಣಸೆ ಹಣ್ಣು, ಹನ್ನೆರೆಡು ಬ್ಯಾಡಗಿ ಮೇಣಸು, ಸ್ವಲ್ಪ ಒಣಕೊಬ್ಬರಿ, ಕಾಲು ಚಮಚ ಹಿಂಗು, ರುಚಿಗೆ ತಕ್ಕಷ್ಟು ಉಪ್ಪು,ಇದೆಲ್ಲವನ್ನು ಹದವಾಗಿ ಹುರಿದು,ಕೊನೆಯಲ್ಲಿ ಕರಿಬೇವು ಹುರಿದು ಬಾಣಲೇ ಯಲ್ಲೇ ಬಿಟ್ಟರೆ ಗರಿಯಾಗುತ್ತದೆ. ಮಿಕ್ಸರ್ ನಲ್ಲಿ ಪುಡಿ ಮಾಡುವುದು.
ದಿನವೊಂದಕ್ಕೆ ಒಂದು ಚಮಚೆಯಷ್ಟು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.


