DGAFMS recruitment 2025- 10 ಮತ್ತು 12ನೇ ತರಗತಿ ಉತ್ತೀರ್ಣರಿಗೆ 113 ಹುದ್ದೆಗಳ ಅರ್ಜಿ ಸರ್ಕಾರಿ ನೌಕರಿಗೆ ಸುವರ್ಣ ಅವಕಾಶ:

0

 ಬೆಂಗಳೂರು, ಫೆಬ್ರವರಿ 02: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪಾಸ್ ಆಗಿ ಸರ್ಕಾರಿ ನೌಕರಿಯನ್ನು ಹುಡುಕುತ್ತಿರುವವರಿಗೆ ಒಂದು ಉತ್ತಮ ಅವಕಾಶ ಸಿಕ್ಕಿದೆ. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶನಾಲಯ (DGAFMS) ತನ್ನಲ್ಲಿ ಖಾಲಿ ಇರುವ 113 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇದರಲ್ಲಿ ಗ್ರೂಪ್ ಸಿ ಹುದ್ದೆಗಳು ಸೇರಿವೆ. ಕೇವಲ 10 ಮತ್ತು 12ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.  

DGAFMS recruitment 2025-ನೇಮಕಾತಿ ವಿವರಗಳು


DGAFMS recruitment 2025-ನೇಮಕಾತಿ ವಿವರಗಳು

  • -ನೇಮಕಾತಿ ಸಂಸ್ಥೆ:ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶನಾಲಯ (DGAFMS)  
  • ಹುದ್ದೆಗಳ ಸಂಖ್ಯೆ:113  
  • ಶೈಕ್ಷಣಿಕ ಅರ್ಹತೆ: 10 ಮತ್ತು 12ನೇ ತರಗತಿ ಉತ್ತೀರ್ಣರು  
  • ಗರಿಷ್ಠ ವಯಸ್ಸು: 30 ವರ್ಷ (ಜಾತಿ ಮೀಸಲಾತಿ ಮತ್ತು ಹುದ್ದೆಗೆ ಅನುಗುಣವಾಗಿ ಸಡಿಲಿಕೆ ಲಭ್ಯ)  
  • ಅರ್ಜಿ ಸಲ್ಲಿಕೆ ಕೊನೆ ದಿನಾಂಕ:ಫೆಬ್ರವರಿ 06  
  • ಅರ್ಜಿ ಸಲ್ಲಿಕೆ ವಿಧಾನ:ಆನ್‌ಲೈನ್  
  • ಮಾಸಿಕ ವೇತನ:ನಿಯಮಾನುಸಾರ  


DGAFMS recruitment 2025-ನೇಮಕಾತಿ ವಿವರಗಳು

ಈ ನೇಮಕಾತಿಯಲ್ಲಿ ಅಕೌಂಟೆಂಟ್, ಸ್ಟೆನೋಗ್ರಾಫರ್, ಎಲ್‌ಡಿಸಿ ಕ್ಲರ್ಕ್, ಸ್ಟೋರ್ ಕೀಪರ್, ಫೈರ್‌ಮ್ಯಾನ್, ಕುಕ್, ಎಂಟಿಎಸ್ ಮುಂತಾದ ಹುದ್ದೆಗಳು ಸೇರಿವೆ. ಅಕೌಂಟೆಂಟ್ ಹುದ್ದೆಗೆ ಬಿಕಾಂ ಪದವಿ ಪಡೆದಿರುವುದು ಕಡ್ಡಾಯವಾಗಿದೆ. ಉಳಿದ ಹುದ್ದೆಗಳಿಗೆ 12ನೇ ತರಗತಿ ಉತ್ತೀರ್ಣರಾಗಿರುವುದರ ಜೊತೆಗೆ ಎರಡು ವರ್ಷದ ಕಾರ್ಯಾನುಭವ ಇರುವವರು ಅರ್ಜಿ ಸಲ್ಲಿಸಬಹುದು.  


DGAFMS recruitment 2025-ವಯೋಮಿತಿ ಮತ್ತು ಇತರೆ ಅರ್ಹತೆಗಳು

ಕನಿಷ್ಠ ವಯಸ್ಸು: 18 ವರ್ಷ  

ಗರಿಷ್ಠ ವಯಸ್ಸು:25 ರಿಂದ 30 ವರ್ಷ (ಹುದ್ದೆ ಮತ್ತು ಮೀಸಲಾತಿ ಅನುಸಾರ ಸಡಿಲಿಕೆ ಲಭ್ಯ)  

ಟೈಪಿಂಗ್ ಸಾಮರ್ಥ್ಯ:ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ನಿಮಿಷಕ್ಕೆ 25 ಪದಗಳನ್ನು ಟೈಪ್ ಮಾಡುವ ಸಾಮರ್ಥ್ಯ ಇರುವವರು ಆದ್ಯತೆ ಪಡೆಯುತ್ತಾರೆ.  


DGAFMS recruitment 2025-ಅರ್ಜಿ ಸಲ್ಲಿಕೆ ಹೇಗೆ?

1. ಅಭ್ಯರ್ಥಿಗಳು  ವೆಬ್‌ಸೈಟ್‌ಗೆ ಭೇಟಿ ನೀಡಬೇಕು.  

2. ಮುಖಪುಟದಲ್ಲಿರುವ ಆನ್‌ಲೈನ್ ಲಿಂಕ್ ಅನ್ನು ಆಯ್ಕೆ ಮಾಡಿ.  

3. ವೈಯಕ್ತಿಕ ವಿವರಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಬೇಕು.  

4. ಲಾಗಿನ್ ಆದ ನಂತರ ಅಗತ್ಯ ಮಾಹಿತಿ ನೀಡಿ ಅರ್ಜಿ ಭರ್ತಿ ಮಾಡಬೇಕು.  

5. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.  

6. ಎಲ್ಲ ಮಾಹಿತಿಯನ್ನು ಪರಿಶೀಲಿಸಿ, ಸಬ್‌ಮಿಟ್ ಮಾಡಿ.  

7. ಭವಿಷ್ಯದ ಉಪಯೋಗಕ್ಕಾಗಿ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.  


DGAFMS recruitment 2025-ಮುಖ್ಯ ಸೂಚನೆ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ವಯಸ್ಸು ಮತ್ತು ಇತರೆ ನಿಯಮಗಳನ್ನು ಪೂರೈಸಿದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ ಫೆಬ್ರವರಿ 06 ಆಗಿದೆ. ಆದ್ದರಿಂದ, ಆಸಕ್ತರು ತಡಮಾಡದೆ ಅರ್ಜಿ ಸಲ್ಲಿಸಬೇಕು.  


ಈ ನೇಮಕಾತಿಯು ಸರ್ಕಾರಿ ನೌಕರಿಯನ್ನು ಹುಡುಕುತ್ತಿರುವ ಯುವಕರಿಗೆ ಒಳ್ಳೆಯ ಅವಕಾಶವಾಗಿದೆ. ಅರ್ಹತೆ ಹೊಂದಿರುವವರು ಕೂಡಲೇ ಅರ್ಜಿ ಸಲ್ಲಿಸಿ ಈ ಸುವರ್ಣ ಅವಕಾಶವನ್ನು ಹಿಡಿಯಿರಿ!

Post a Comment

0Comments
Post a Comment (0)